ತೈ ತುಂಗ್ - ಯುವಾನ್
1724 - 1777. ಚೀನದ ಪ್ರಮುಖ ತತ್ತ್ವe್ಞÁನಿಗಳಲ್ಲಿ ಒಬ್ಬ. ಪ್ರಮಾಣಕ್ಕೆ ಒರೆಹಚ್ಚಿಯೇ ತತ್ತ್ವವನ್ನು ನಿರ್ಣಯಿಸಬೇಕು ಎಂಬುದು ಇವನ ನಿಲವು. ಚೀನದದಲ್ಲಿಯೇ ಹುಟ್ಟಿ ಬೆಳೆದ ಈತ ಗಣಿತಶಾಸ್ತ್ರ, ಭಾಷಾಶಾಸ್ತ್ರ, ಧರ್ಮಶಾಸ್ತ್ರಗಳಲ್ಲಿ ಅಪಾರ ಪಾಂಡಿತ್ಯವನು ಗಳಿಸಿ ಚೀಎನ್ - ಲುಂಗ್ ಚಕ್ರವರ್ತಿಯ ಆಸ್ಥಾನದಲ್ಲಿ ಪೀಕಿಂಗಿನ ಇಂಪೀರಿಯಲ್ ಮ್ಯಾನುಸ್ಕ್ರಿಪ್ಟ್ಸ್ ಲೈಬ್ರರಿಯಲ್ಲಿ ಅಧಿಕಾರಿಯಾಗಿ ನೇಮಿಸಲ್ಪಟ್ಟು ಅನೇಕ ಅಪೂರ್ವ ಗ್ರಂಥಗಳ ಅಧ್ಯಯನ ನಡೆಸಿದ.

ತನ್ನ ಜೀವಮಾನದಲ್ಲಿ ಈತ ಗಣಿತ, ಭಾಷಾಧ್ಯಯನ ಪ್ರಾಚೀನ ಭೂಗೋಳ ಮತ್ತು ಕನ್‍ಫ್ಯೂಷನ್ ವಚನಗಳು ಇತ್ಯಾದಿಗಳನ್ನು ಕುರಿತ ಐವತ್ತರಷ್ಟು ಗ್ರಂಥಗಳನ್ನು ರಚಿಸದ್ದಾನೆ, ಇಲ್ಲವೆ ಸಂಪಾದಿಸಿದ್ದಾನೆ. ಆದರೆ ಎಲ್ಲಕ್ಕಿಂತ ಮಿಗಿಲಾದ ಇವನ ಕೊಡುಗೆಯೆಂದರೆ ತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ್ದು ಸುಂಗ್ ಚಕ್ರವರ್ತಿಳ ಕಾಲದಲ್ಲಿ ನವೀನ ಕನ್‍ಫ್ಯೂಷಸ್ - ಸಿದ್ಧಾಂತವೆಂಬ ಹೊಸ ತತ್ತ್ವವಾದ ಪ್ರಚಾರಕ್ಕೆ ಬಂದಿತ್ತು. ಅದರ ಪ್ರಕಾರ ಮನುಷ್ಯನಿಗೆ ದ್ವಿಮುಖವಾದ ಸ್ವರೂಪವುಂಟು; ಒಂದು ಭೌತಿಕ ಮತ್ತು ಇನ್ನೊಂದು ಆಧ್ಯಾತ್ಮಿಕ. ಆಧ್ಯಾತ್ಮಿಕ ಸ್ವರೂಪ ದೈವದತ್ತವಾದ ಕಾರಣ ಮನುಷ್ಯ ಸ್ವಭಾವತಃ ಸತ್ಪುರುಷನೇ. ತೈತುಂಗನಿಗಿಂತ ಪೂರ್ವದ ತತ್ತ್ವe್ಞÁನಿಗಳೂ ಈ ತತ್ತ್ವವನ್ನು ಖಂಡಿಸಲು ಶ್ರಮಿಸಿದ್ದರು; ಆದರೆ ಈ ತತ್ತ್ವ ನಿರರ್ಥಕ, ದೋಷಪೂರ್ಣ ಹಾಗೂ ನಿರುಪಯೋಗಿಯೆಂದು ಪ್ರಬಲವಾಗಿ ವಾದಿಸಿ ಕೀರ್ತಿ ತೈತುಂಗನದು. ಮನುಷ್ಯನಲ್ಲಿ ರಾಗದ್ವೇಷಗಳು, ದುರಾಲೋಚನೆಗಳು, ದುಷ್ಪ್ರವೃತ್ತಿಗಳು ಕೂಡ ಶಾಶ್ವತವಾಗಿ ಸೇರಿಕೊಂಡೇ ಇರುತ್ತವೆಂದು ಇವನ ಸಿದ್ಧಾಂತ; ಅವುಗಳ ದುಷ್ಪ್ರಭಾವವನ್ನು ತಗ್ಗಿಸಲಿರುವ ಒಂದೇ ಉಪಾಯವೆಂದರೆ ಸತ್ಯದ ಅನ್ವೇಷಣೆ; ನಿತ್ಯದ ಸಾಕ್ಷಾತ್ಕಾರಕ್ಕೆ ನಿಷ್ಕøಷ್ಟತೆ, ನಿಷ್ಪಕ್ಷವಾದ ಮನೋವೃತ್ತಿ ಮತ್ತು ನಿರ್ದಿಷ್ಟತೆಗಳು ಅಗತ್ಯ; ಸಾಹಿತ್ಯವೇ ಇರಲಿ, ತತ್ತ್ವಶಾಸ್ತ್ರವೇ ಇರಲಿ, ಭಾಷಾಶಾಸ್ತ್ರ ಇರಲಿ, ಇತಿಹಾಸ ಇರಲಿ - ಎಲ್ಲ ಕ್ಷೇತ್ರಗಳಲ್ಲಿಯೂ ಸಮಾನವಾಗಿ ಅನ್ವಯಿಸುವ ಅಂಶವಿದು. ಸುಂಗ್ ತತ್ತ್ವe್ಞÁನಿಗಳು ಹೇಳಿದ ಧ್ಯಾನ ಸಾಕ್ಷಾತ್ಕಾರಕ್ಕೆ ಸಾಲದು; ಖಚಿತ ಹಾಗೂ ಪರಿನಿಶ್ಚಿತ ಸಂಶೋಧನೆಯೇ ತಾರಕ.

ತೈ ತುಂಗನಿಗೆ ನಿಷ್ಠರಾದ ಶಿಷ್ಯರಿಲ್ಲದೆ ಹೋದುದರಿಂದ ನೂರಾರು ವರ್ಷಗಳ ಕಾಲ ಈತನ ಸಿದ್ಧಾಂತ ಪ್ರಚಾರವನ್ನು ಕಾಣದೆ ಮೂಲೆಗುಂಪಾಗಿತ್ತು. ಆದರೆ ಪಾಶ್ಚಾತ್ಯ ವೈe್ಞÁನಿಕ ಮನೋವೃತ್ತಿಗೆ ಈ ತತ್ತ್ವ ಸಂವಾದಿಯಾಗಿದ್ದುದರಿಂದ ಈಚೆಗೆ ಇದಕ್ಕೆ ಪ್ರಾಮುಖ್ಯ ಬರತೊಡಗಿತು. 1924 ರಲ್ಲಿ ಪೀಕಿಂಗಿನಲ್ಲಿ ಇವನ ದ್ವಿಶತಮನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. 1936 ರಲ್ಲಿ ಚೀನೀ ವಿದ್ವಾಂಸರು ಇವನ ಗ್ರಂಥಗಳನ್ನೆಲ್ಲ ಒಟ್ಟುಗೂಡಿಸಿ ಪ್ರಕಟಗೊಳಿಸಿದರು.						(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ